Post office recruitment : 21,413 ಪೋಸ್ಟ್ ಆಫೀಸ್ ಹುದ್ದೆಗಳ ಬೃಹತ್ ನೇಮಕಾತಿ! 10 ನೇ ಪಾಸಾದರೆ ಸಾಕು!
Post office recruitment : ವಿಧ್ಯಾರ್ಥಿಗಳಿಗೆ ಇದು ಗುಡ್ ನ್ಯೂಸ್. ಹೌದು ನೀವೇನಾದರೂ 10 ನೆಯ ತರಗತಿ ಪಸಾಗಿದ್ದೀರಾ? ಒಳ್ಳೆಯ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದಿರಾ? ಹಾಗಾದರೆ ಈ ಲೇಖನ ಕೊನೆಯ ತನಕ ತಪ್ಪದೆ ಓದಿ. ಯಾಕೆಂದರೆ 10 ನೆಯ ತರಗತಿ ಪಾಸಾದ ವಿಧ್ಯಾರ್ಥಿಗಳಿಗೆ ಪೊಸ್ಟ್ ಆಫೀಸ್ ಇಲಾಖೆಯ ಮೂಲಕ 21,413 ಹುದ್ದೆಗಳ ಬೃಹತ್ ನೇರ ನೇಮಕಾತಿ ಹೊರಡಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಇದನ್ನು ಕೊನೆಯ ತನಕ ಓದಿ.
ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿ :
ಹೌದು ವಿದ್ಯಾರ್ಥಿಗಳೇ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 21,413 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇರ ನೇಮಕಾತಿಗೆ ಕರೆಯಲಾದ ಅರ್ಜಿ ಕರೆಯಲಾಗಿದೆ. ಇದರಲ್ಲಿ BPM & ABPM ಹುದ್ದೆಗಳು ಖಾಲಿ ಇದ್ದು, ಕೇವಲ 10 ನೆಯ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿಯೋಣ.
ಒಟ್ಟು ಹುದ್ದೆಗಳಲ್ಲಿ ಕರ್ನಾಟಕದಲ್ಲಿ 1135 ಹುದ್ದೆಗಳು ಖಾಲಿ ಇದ್ದು, ನಿರುದ್ಯೋಗಿಗಳಿಗೆ, ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಒಳ್ಳೆಯ ಅವಕಾಶ ಎನ್ನಬಹುದು.
SSP ಸ್ಕಾಲರ್ಶಿಪ್ ಅರ್ಜಿ ಹಾಕಲು ಇಲ್ಲಿ ಒತ್ತಿ. ಕೊನೆಯ ದಿನಾಂಕದ ಮಾಹಿತಿ ತಿಳಿಯಿರಿ.
ಅಂಚೆ ಇಲಾಖೆ ಹುದ್ದೆಯ ವಿವರ (Post office recruitment) :
- ಹುದ್ದೆಗಳು : ಅಂಚೆ ಇಲಾಖೆ ಹುದ್ದೆಗಳು
- ಖಾಲಿ : 21,413 ಹುದ್ದೆಗಳು
- ಕರ್ನಾಟಕದಲ್ಲಿ ಖಾಲಿ : 1135 ಹುದ್ದೆಗಳು
- BPM ವೇತನ : ಸುಮಾರು 12,00 – 29,380
- ABPM ವೇತನ : 10,000 – 24,440
- ಆಯ್ಕೆ : ನೇರ ನೇಮಕಾತಿ
- ಅರ್ಜಿ : ಆನ್ಲೈನ್ ಮೂಲಕ
ಅರ್ಜಿ ಹಾಕಲು ಅರ್ಹತೆಗಳು :
10 ನೆಯ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದು.
ಅರ್ಜಿ ಹಾಕುವ ಅಭ್ಯರ್ಥಿ 18 ರಿಂದ 40 ವರ್ಷ ವಯಸ್ಸು ಒಳಗೆ ಇರಬೇಕು.
ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿದ ಪ್ರಮಾಣ ಪತ್ರ
ಆಯಾ ರಾಜ್ಯದ ಭಾಷೆ ಬರಬೇಕು.
10 ನೆಯ ತರಗತಿಯ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಹಾಕಲು ಪ್ರಮುಖ ದಿನಾಂಕಗಳು ಯಾವುವು?
- ಅರ್ಜಿಬರಂಭವಾದ ದಿನಾಂಕ – 10/02/2025
- ಅರ್ಜಿ ಕೊನೆಯ ದಿನಾಂಕ – 03/03/2025
ಅರ್ಜಿ ಹಾಕುವ ವಿಧಾನ ಹೇಗೆ ?
ವಿದ್ಯಾರ್ಥಿಗಳೇ ಇದೊಂದು ಉತ್ತಮ ಉದ್ಯೋಗಾವಕಾಶ ಆದ್ದರಿಂದ, ಆಸಕ್ತಿ ಮತ್ತು ಅರ್ಹತೆ ಇರುವ ಪ್ರತಿಯೊಬ್ಬ ವಿಧ್ಯಾರ್ಥಿಗಳು ಅರ್ಜಿ ಹಾಕಿ ಉದ್ಯೋಗ ಪಡೆಯಿರಿ. ಅರ್ಜಿಯನ್ನು ಆನ್ಲೈನ್ ಅಲ್ಲಿ ಹಾಕಬಹುದು. ಅದಕ್ಕೆ ಬೇಕಾದ ಲಿಂಕ್ ಕೆಳಗೆ ನೀಡಲಾಗಿದೆ. ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಅಲ್ಲಿಯೂ ಅರ್ಜಿ ಹಾಕಬಹುದು.
ಅರ್ಜಿ ಹಾಕಲು ಈ ಲಿಂಕ್ ಬಳಸಿ.
https://indiapostgdsonline.gov.in/
ವಿದ್ಯಾರ್ಥಿಗಳೇ ಈ ಮೇಲಿನ ಲಿಂಕ್ ಬಳಸಿ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ದುಕೊಳ್ಳಲಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ. ಇದೆ ರೀತಿಯ ಹೊಸ ಹುದ್ದೆಗಳ ಮಾಹಿತಿಗೆ ನಮ್ಮ ಲೇಖನ ಭೇಟಿ ನೀಡಿ.